ಉತ್ತರ ವಲಯ ಗ್ರಂಥಾಲಯದ ಬಗ್ಗೆ

ಸಾರ್ವಜನಿಕ ಗ್ರಂಥಾಲಯಗಳು ಒಂದು ರಾಷ್ಟ್ರದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಉನ್ನತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗ್ರಂಥಾಲಯಗಳು ತಮ್ಮದೇ ಆದ ವಿಶಿಷ್ಟ ಸೇವೆಗಳಿಗೆ ರಾಷ್ಟ್ರವನ್ನು ಪ್ರಗತಿಪಥದತ್ತ ಸಾಗಿಸಿ ಗುರಿಮುಟ್ಟಲು ಅನುವಾಗುತ್ತಿವೆ.

ನಗರ ಕೇಂದ್ರ ಗ್ರಂಥಾಲಯ, ಉತ್ತರ ವಲಯ 46 ಗ್ರಂಥಾಲಯಗಳನ್ನು ಒಳಗೊಂಡಿದ್ದು, ಬೆಳಗ್ಗೆ 8.30 ರಿಂದ ರಾತ್ರಿ 8.00 ರವರೆಗೆ ಕಾರ್ಯ ನಿರ್ವಹಿಸುವ ನಾಲ್ಕು ಶಾಖೆಗಳು, 8.30 ರಿಂದ 11.30 ರವರೆಗೆ ಹಾಗೂ ಸಂಜೆ 4.00 ರಿಂದ 8.00 ರವರೆಗೆ ಕಾರ್ಯ ನಿರ್ವಹಿಸುವ ಇಪ್ಪತ್ತಾರು ಶಾಖೆಗಳು, ಎಂಟು ವಾಚನಾಲಯಗಳು, ಏಳು ಗ್ರಾಮ ಪಂಚಾಯಿತಿಗಳು, ಒಂದು ಮಕ್ಕಳ ಸಮುದಾಯ ಕೇಂದ್ರ ಗ್ರಂಥಾಲಯಗಳು ಈ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ಗ್ರಂಥಾಲಯಗಳಲ್ಲೂ ಪುಸ್ತಕಗಳು, ದಿನಪತ್ರಿಕೆಗಳು, ನಿಯತಕಾಲಿಕೆಗಳು, ಅಂಚೆ ನಿಯತಕಾಲಿಕೆಗಳು ಲಭ್ಯವಿರುತ್ತದೆ.

ಗ್ರಂಥಾಲಯಗಳ ಪ್ರಮುಖ ವಿಭಾಗಗಳು

ದಿನಪತ್ರಿಕೆ/ನಿಯತಕಾಲಿಕೆ ವಿಭಾಗ

ಗ್ರಂಥಾಲಯದ ನಿಯತಕಾಲಿಕೆ ವಿಭಾಗಗಳಲ್ಲಿ ವಿವಿಧ ದಿನಪತ್ರಿಕೆಗಳು, ನಿಯತಕಾಲಿಕೆಗಳು ಲಭ್ಯವಿದೆ. ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂದಿಸಿದಂತೆ ನಿಯತಕಾಲಿಕೆಗಳು ಓದುಗರಿಗೆ ಆಸಕ್ತಿಯನ್ನು, ಕ್ರಿಯಾಶೀಲತೆ, ಸೃಜನಶೀಲತೆಯನ್ನು ಮೂಡಿಸುವಂತೆ ಮಾಸ ಪತ್ರಿಕೆ, ನಿಯತಕಾಲಿಕೆಗಳನ್ನು ಹೊಂದಿದೆ. ವಯೋ ವೃದ್ದರು ದಿನಪತ್ರಿಕೆಗಳನ್ನು ಓದುವ ಆಸಕ್ತಿಯನ್ನು ಹೊಂದಿರುತ್ತಾರೆ, ಅದರಂತೆ ನಿಯತಕಾಲಿಕೆ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ಓದುತ್ತಾರೆ. ಸ್ಪರ್ಧಾತ್ಮಕ ನಿಯತಕಾಲಿಕೆಗಳನ್ನು ವಿದ್ಯಾರ್ಥಿಗಳು ಬಳಸುತ್ತಾರೆ, ಅದರಂತೆ ಮಕ್ಕಳ ನಿಯತಕಾಲಿಕೆಗಳು ಲಭ್ಯವಿರುತ್ತದೆ.

ಪುಸ್ತಕ ವಿತರಣ ವಿಭಾಗ

ಗ್ರಂಥಾಲಯದ ಸದಸ್ಯರು ಈ ವಿಭಾಗದಲ್ಲಿರುವ ಪುಸ್ತಕಗಳನ್ನು ಮನೆಗೆ ಪಡೆಯಬಹುದು. ಸಾಹಿತ್ಯದ ಪುಸ್ತಕಗಳು, ವಿಷಯವಾರು ಪುಸ್ತಕಗಳು, ವಿವಿಧ ಭಾಷಾ ಪುಸ್ತಕಗಳನ್ನು ಹೊಂದಿರುವ ಈ ವಿಭಾಗದಲ್ಲಿ ಸದಸ್ಯರು ಕಾದಂಬರಿಗಳನ್ನು ಓದುತ್ತಾರೆ. ಪ್ರಮುಖ ಹಾಗೂ ಪ್ರಸಿದ್ಧ ಲೇಖಕರ ಪುಸ್ತಕಗಳು ಲಭ್ಯವಿರುತ್ತದೆ. ಪುಸ್ತಕ ವಿತರಣೆ, ಮತ್ತೆ ಪಡೆಯುವುದು, ತಡವಾದ ಪುಸ್ತಕಗಳ ಸದಸ್ಯರಿಂದ ದಂಡ ಪಡೆಯುವುದು ಈ ವಿಭಾಗದ ಪ್ರಮುಖ ಕಾರ್ಯ. 15 ದಿನಗಳ ಅವಧಿಗೆ ಪುಸ್ತಕಗಳನ್ನು ಮನೆಗೆ ಪಡೆಯಬಹುದು,ಒಂದು ಬಾರಿಗೆ ಮೂರು ಪುಸ್ತಕಗಳನ್ನು ಪಡೆಯಬಹುದು. ಓದುಗರು ಈ ವಿಭಾಗದಲ್ಲಿ ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳ ಮಾಹಿತಿಯನ್ನು ಪಡೆಯಬಹುದು.

ಪರಾಮರ್ಶನ ವಿಭಾಗ

ಪರಾಮರ್ಶನ ಸೇವಾ ವಿಭಾಗವು ಗ್ರಂಥಾಲಯದಲ್ಲಿ ರಾಶಿ ರಾಶಿ ಗ್ರಂಥಗಳ ನಡುವೆ ಓದುಗರಿಗೆ ಬೇಕಾದ ಮಾಹಿತಿಯನ್ನು ನಿಖರವಾಗಿ ಹಾಗು ಶೀಘ್ರಗತಿಯಿಂದ ಪೂರೈಸುವುದೇ ಪರಾಮರ್ಶನ ಸೇವಾ ವಿಭಾಗದ ಮುಖ್ಯ ಉದ್ದೇಶ. ಪರಾಮರ್ಶನ ವಿಭಾಗದ ಸಿಬ್ಬಂದಿಯು ಗ್ರಂಥ ಮತ್ತು ಓದುಗರ ನಡುವೆ ಸೇತುವಾಗಿ ಓದುಗರ ಸಂಪರ್ಕ ಬೆಳೆಸಿ, ಅವರಿಗೆ ಬೇಕಾದ ಮಾಹಿತಿಯನ್ನು ವೈಯಕ್ತಿಕವಾಗಿ, ನಿಖರವಾಗಿ ಶೀಘ್ರಗತಿಯಿಂದ ಒದಗಿಸಲಾಗುತ್ತದೆ.

ಪರಾಮರ್ಶನ ಸೇವಾ ವಿಭಾಗದ ಗ್ರಂಥಗಳ ಪ್ರಭೇದಗಳು:
  • ನಿಘಂಟುಗಳು
  • ವಿಶ್ವಕೋಶಗಳು
  • ವಾರ್ಷಿಕ ಪುಸ್ತಕಗಳು
  • ವ್ಯಕ್ತಿ ಪರಿಚಯ ಕೋಶಗಳು
  • ಕೈಪಿಡಿಗಳು ಮತ್ತು ಪ್ರಯೋಗ ಪುಸ್ತಕಗಳು
  • ಭೌಗೋಳಿಕ ಗ್ರಂಥಗಳು
  • ದಾಖಲೆ ಪುಸ್ತಕಗಳು
  • ಸಂಯುಕ್ತ ಗ್ರಂಥಸೂಚಿ
  • ಲೇಖನ ಸೂಚಿಗಳು
  • ಸಾರಂಶ ನಿಯತಕಾಲಿಕೆಗಳು
  • ಪ್ರಸಕ್ತ ಮಾಹಿತಿ ಪತ್ರಿಕೆಗಳು

ಪ್ರಚಲಿತ ಘಟನೆಗಳ ಸ್ಪರ್ಧಾತ್ಮಕ ವಿಷಯಕ್ಕೆ ಸಂಬಂದಿಸಿದಂತೆ ಪುಸ್ತಕಗಳನ್ನು ಈ ವಿಭಾಗದಲ್ಲಿ ಲಭ್ಯವಿರುತ್ತದೆ.

'ಮಾಹಿತಿ ಪ್ರಸರಣ' ಆಧುನಿಕ ಗ್ರಂಥಾಲಯದ ಪ್ರಮುಖವಾದ ಕಾರ್ಯ. ಈ ಕಾರ್ಯಕ್ಕಾಗಿ ಗ್ರಂಥಾಲಯಗಳು ಅನೇಕ ಸೇವೆಗಳನ್ನು ಹಮ್ಮಿಕೊಳ್ಳುತ್ತವೆ. ಅವುಗಳಲ್ಲಿ ಮುಖ್ಯವಾದ ಸೇವೆಯೆಂದರೆ ಪರಾಮರ್ಶನ ಸೇವೆ.