ಕೆಲಸದ ವೇಳೆ:
ರಾಜ್ಯ ಸರ್ಕಾರದಿಂದ ಸಾರ್ವಜನಿಕ ರಜೆ ಎಂದು ಘೋಷಿಸಲ್ಪಟ್ಟ ರಜಾ ದಿನಗಳು, ಎರಡನೇ ಮಂಗಳವಾರ, ನಾಲ್ಕನೇ ಶನಿವಾರ ಹಾಗೂ ವಾರದ ರಜೆ ಸೋಮವಾರ ಹೊರತುಪಡಿಸಿ ಶಾಖಾ ಗ್ರಂಥಾಲಯಗಳು (ಮುಖ್ಯ 4 ಶಾಖಾ ಗ್ರಂಥಾಲಯ) ಬೆಳಗ್ಗೆ 8.30 ರಿಂದ ರಾತ್ರಿ 8.00 ಗಂಟೆಯವರೆಗೆ, ಶಾಖಾ ಗ್ರಂಥಾಲಯಗಳು ಬೆಳಗ್ಗೆ 8.30 ರಿಂದ 11.30 ರವರೆಗೆ ಮತ್ತು ಸಂಜೆ 4.00 ರಿಂದ ರಾತ್ರಿ 8.00 ಗಂಟೆಯವರೆಗೆ ಸಾರ್ವಜನಿಕ ಸೇವೆಗಾಗಿ ತೆರೆದಿರುತ್ತವೆ.
ಗ್ರಂಥಾಲಯ್ಕಕೆ ಪ್ರವೇಶ:
- ಗ್ರಂಥಾಲಯಕ್ಕೆ ಪ್ರವೇಶಿಸುವ ಪೂರ್ವದಲ್ಲಿ ಪ್ರವೇಶ ದ್ವಾರದಲ್ಲಿ ಇಟ್ಟಿರುವ ಪುಸ್ತಕದಲ್ಲಿ ತಮ್ಮ ಹೆಸರು, ವಿಳಾಸ ಬರೆದು ಸಹಿ ಮಾಡಬೇಕು.
- ಓದುಗರು ತಮ್ಮ ವಸ್ತುಗಳಿಗೆ ತಾವೇ ಜವಾಬ್ದಾರರು. ಅಂತಹ ವಸ್ತುಗಳು ನಷ್ಟವಾದಲ್ಲಿ ಅಥವಾ ಅದಲು ಬದಲು ಆದಲ್ಲಿ ಉಂಟಾಗುವ ಹಾನಿಗೆ ಗ್ರಂಥಾಲಯ ಹೊಣೆಯಲ್ಲ.
- ಪ್ರತಿಯೊಬ್ಬರು ಗ್ರಂಥಾಲಯದಲ್ಲಿ ಶಾಂತತೆ ಕಾಪಾಡಲು ಸಹಕರಿಸಬೇಕು. ಗ್ರಂಥಾಲಯವನ್ನು ಉಪಯೋಗಿಸುವ ಇತರೇ ವ್ಯಕ್ತಿಗಳಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು.
- ಗ್ರಂಥಾಲಯದ ಸ್ವಚ್ಛತೆಯನ್ನು ಕಾಪಾಡುವುದು. ಧೂಮಪಾನ ಮಾಡುವುದು, ಅಸಭ್ಯತನದಿಂದ ವರ್ತಿಸುವುದು ಹಾಗೂ ಗ್ರಂಥಾಲಯದಲ್ಲಿ ನಿದ್ರಿಸುವುದನ್ನು ನಿಷೇದಿಸಲಾಗಿದೆ.
- ಗ್ರಂಥಾಲಯಕ್ಕೆ ಭೇಟಿ ನೀಡುವ ಸದಸ್ಯರು ಮತ್ತು ಎರವಲುದಾರರು ಕಾಲಕಾಲಕ್ಕೆ ಜಾರಿಯಲ್ಲಿರುವ ಗ್ರಂಥಾಲಯದ ನಿಯಮಗಳು ಮತ್ತು ಕ್ರಮಗಳಿಗೆ ಬದ್ಧರಾಗಿರಬೇಕು.
- ಗ್ರಂಥಾಲಯದಲ್ಲಿನ ಪುಸ್ತಕಗಳ ಅಥವಾ ಇತರೆ ವಸ್ತುಗಳನ್ನು ಕಳುವು ಮಾಡಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
ಎರವಲು ನೊಂದಣಿ:
- ಬೆಂಗಳೂರು ನಗರದಲ್ಲಿ ವಾಸಿಸುವ ಯಾವುದೇ ವ್ಯಕ್ತಿಯು ಗ್ರಂಥಾಲಯದಿಂದ ಪುಸ್ತಕಗಳನ್ನು ಎರವಲು ಪಡೆಯಲು ನೊಂದಣಿಯನ್ನು ಮಾಡಿಸಬಹುದಾಗಿದೆ.
- ನಿರ್ಧಿಷ್ಠ ಗ್ರಂಥಾಲಯದಲ್ಲಿ ಎರವಲುದಾರರಾಗಿ ನೊಂದಾಯಿಸಿದ ವ್ಯಕ್ತಿಯು ಅದೇ ಕಾರ್ಡಿನಿಂದ ಮತ್ತೊಂದು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಎರವಲು ಪಡೆಯಲು ಅರ್ಹರಲ್ಲ.
- ಯಾವ ವ್ಯಕ್ತಿಯೇ ಆಗಲಿ ಗ್ರಂಥಾಲಯದ ಎರವಲು ನೊಂದಣಿ ಹೊಂದಲು ಅನರ್ಹನೆಂದು ಕಂಡು ಬಂದಲ್ಲಿ ಅಂತಹವರ ಅರ್ಜಿಗಳನ್ನು ತಿರಸ್ಕರಿಸುವ ಅಧಿಕಾರ ಗ್ರಂಥಾಲಯಾಧಿಕಾರಿಗಳಿಗೆ ಇರುತ್ತದೆ.
ಎರವಲು ಚೀಟಿ:
- ಎರವಲು ಚೀಟಿಗಳನ್ನು ವರ್ಗಾಯಿಸತಕ್ಕದಲ್ಲ.
- ಎರವಲು ಅವಧಿ ಗರಿಷ್ಠ 15 ದಿನಗಳು ಮಾತ್ರ.
- ಗ್ರಂಥಗಳನ್ನು ನಿಗದಿತ ದಿನಾಂಕದ ಒಳಗಾಗಿ ಹಿಂದಿರುಗಿಸತಕ್ಕದು, ಇಲ್ಲವಾದಲ್ಲಿ ನಿಗದಿತ ದಂಡ ಪಾವತಿಸತಕ್ಕದ್ದು.
- ಎರವಲು ಪಡೆದ ಗ್ರಂಥಗಳನ್ನು ಯಥಾಸ್ಥಿತಿಯಲ್ಲಿಯೇ ಹಿಂದಿರುಗಿಸುವುದು.
- ಕಳೆದ/ಹಾಳಾದ/ಹರಿದ ಗ್ರಂಥದ ಎರಡರಷ್ಟು ಬೆಲೆಯನ್ನು ದಂಡ ಶುಲ್ಕದೊಂದಿಗೆ ಪಾವತಿಸತಕ್ಕದ್ದು.
- ಗ್ರಂಥಾಲದಿಂದ ಪುಸ್ತಕಗಳನ್ನು ಎರವಲು ಪಡೆದುಕೊಳ್ಳುವುದನ್ನು ನಿಲ್ಲಿಸಬಯಸುವವರು ತಮ್ಮ ಎಲ್ಲಾ ಕಾರ್ಡುಗಳನ್ನು ರದ್ದು ಪಡಿಸುವುದಕ್ಕಾಗಿ ಗ್ರಂಥಾಲಯಕ್ಕೆ ಒಪ್ಪಿಸಬೇಕು.
- ಕಾರ್ಡುಗಳನ್ನು ಹೊಂದಿದ ಎರವಲುದಾರರು ಗ್ರಂಥಾಲಯದ ದಾಖಲೆಗಳಲ್ಲಿ ತೋರಿಸಿದಂತೆ ಆ ಕಾರ್ಡುಗಳಿಗೆ ಪ್ರತಿಯಾಗಿ ಕೊಟ್ಟ ಪುಸ್ತಕಗಳಿಗೆ ಹೊಣೆಗಾರರು.
- ಎರವಲುದಾರ ಕಾರ್ಡುಗಳಿಗೆ ಪ್ರತಿಯಾಗಿ ಪಡೆದುಕೊಂಡ ಎಲ್ಲಾ ಪುಸ್ತಕಗಳನ್ನು ಹಿಂದಿರುಗಿಸದೇ ಹಾಗೂ ಯಾವುದೇ ಬಾಕಿಯನ್ನು ತೀರಿಸದೇ ಠೇವಣಿ ಹಣವನ್ನು ಹಿಂತಿರುಗಿ ಪಡೆಯಲು ಅರ್ಹನಲ್ಲ.
ಎರವಲು ನಿಯಮಗಳು :
- ಗ್ರಂಥಾಲಯದಿಂದ ಪುಸ್ತಕಗಳನ್ನು ಎರವಲು ಪಡೆಯುವ ಹಾಗೂ ಹಿಂತಿರುಗಿಸುವ ವ್ಯವಸ್ಥೆಯನ್ನು ಎರವಲುದಾರರೇ ಮಾಡಿಕೊಳ್ಳಬೇಕು.
- ಎರವಲು ಪಡೆದ ಪುಸ್ತಕಗಳನ್ನು 15 ದಿನ ಅಥವ ನಿರ್ಧಿಷ್ಟ ಪಡಿಸಿದ ದಿನಾಂಕದೊಳಗಾಗಿ ಹಿಂದಿರುಗಿಸತಕ್ಕದ್ದು.
- ಎರವಲು ಪಡೆದುಕೊಂಡ ಪುಸ್ತಕಗಳನ್ನು ಬೇರೆಯವರಿಗೆ ಮರು ಎರವಲು ನೀಡುವುದಾಗಲಿ ಅಥವಾ ತನಗೆ ನೀಡಲಾದ ಕಾರ್ಡುಗಳ ಸೌಲಭ್ಯವನ್ನು ಬೇರೆಯವರಿಗೆ ನೀಡುವುದಕ್ಕೆ ಅವಕಾಶವಿರುವುದಿಲ್ಲ.
- ಪುಸ್ತಕಗಳನ್ನು ಎರವಲುದಾರರು ಕಳೆದರೆ ಮೂಲಬೆಲೆಯ ಎರಡರಷ್ಟು ಹಣವನ್ನು ಗ್ರಂಥಾಲಯಕ್ಕೆ ಕಟ್ಟಬೇಕು.
- ಯಾವುದೇ ವ್ಯಕ್ತಿಯು ಗ್ರಂಥಾಲಯಕ್ಕೆ ಸಂಬಂಧಪಟ್ಟ ಪುಸ್ತಕ, ಹಸ್ತಪ್ರತಿ ಹಾಗೂ ನಕ್ಷೆಗಳ ಮೇಲೆ ಬರೆಯುವುದು ಗುರುತು ಹಾಕುವುದು ಹಾಗೂ ಹಾಳು ಮಾಡುವುದನ್ನು ಪ್ರತಿಬಂಧಿಸಲಾಗಿದೆ.
- ಗ್ರಂಥಾಲಯಕ್ಕೆ ಸಂಬಂಧಪಟ್ಟ ಯಾವುದೇ ಆಸ್ತಿಗೆ ಹಾನಿ ಮಾಡಿದವರು ಅಂತಹ ಹಾನಿಯ ಮೌಲ್ಯವನ್ನು ಭರಿಸಬೇಕಾಗುತ್ತದೆ.
- ಗ್ರಂಥಾಲಯದಿಂದ ಹೊರಬರುವ ಪೂರ್ವದಲ್ಲಿ ಪರಾಮರ್ಶನಾ ವಿಭಾಗದಿಂದ ಪಡೆದ ಗ್ರಂಥಗಳನ್ನು ಆ ವಿಭಾಗದಲ್ಲೇ ಹಿಂದಿರುಗಿಸಬೇಕು.
- “ಪರಾಮರ್ಶೆಗೆ ಮಾತ್ರ” ಎಂದು ಗುರುತು ಮಾಡಿದ ಪುಸ್ತಕಗಳನ್ನು ಎರವಲು ನೀಡಲಾಗುವುದಿಲ್ಲ.