ತಿಂಗಳ ಸಾಹಿತಿ
Kannada Authors

ನಗರ ಕೇಂದ್ರ ಗ್ರಂಥಾಲಯ, ಉತ್ತರ ವಲಯ, ಮಲ್ಲೇಶ್ವರಂ, ಬೆಂಗಳೂರು, ಇಲ್ಲಿ “ಡಿಸೆಂಬರ್ 2018” ರಂದು “ತಿಂಗಳ ಸಾಹಿತಿ” ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಪ್ರತಿ ತಿಂಗಳು ಆ ತಿಂಗಳಲ್ಲಿ ಜನಿಸಿದ ಸಾಹಿತಿಗಳ ಮಾಹಿತಿಯನ್ನು ಹಾಗೂ ಪುಸ್ತಕಗಳನ್ನು ಪ್ರದರ್ಶಿಸಲಾಗುವುದು. ಸಾಹಿತಿಗಳಿಗೆ ಗೌರವವನ್ನು ಸೂಚಿಸುವ ಕಾರ್ಯಕ್ರಮ ಇದಾಗಿದ್ದು, ಅವರ ಮಾಹಿತಿಯನ್ನು ಪ್ರತಿ ತಿಂಗಳು ಮಲ್ಲೇಶ್ವರಂ ಶಾಖಾ ಗ್ರಂಥಾಲಯದ ನಿಯತಕಾಲಿಕೆ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತಿದೆ. ಖ್ಯಾತ ಸಾಹಿತಿಗಳಾದ ಶ್ರೀಮತಿ ಕಮಲಾ ಹಂಪನ ರವರಿಂದ ಉದ್ಘಾಟನೆಗೊಂಡ ಈ ಕಾರ್ಯಕ್ರಮ ಓದುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ, ಇಲಾಖಾ ನಿರ್ದೇಶಕರಾದ ಶ್ರೀ ಸತೀಶ್ ಕುಮಾರ್ ಎಸ್ ಹೊಸಮನಿ, ವಿಶ್ರಾಂತ ನಿರ್ದೇಶಕರಾದ ಶ್ರೀ ಪಿ. ವೈ. ರಾಜೇಂದ್ರಕುಮಾರ್, ವಲಯದ ಉಪ ನಿರ್ದೇಶಕರಾದ ಶ್ರೀ ಹೆಚ್.ಚಂದ್ರಶೇಖರ್, ಮುಖ್ಯ ಗ್ರಂಥಾಲಯಾಧಿಕಾರಿಗಳಾದ ಶ್ರೀಮತಿ ಮಂಜುಳ. ಬಿ.ಎಸ್ ಇವರ ಮಾರ್ಗದರ್ಶನದೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮ ಸಾರ್ವಜನಿಕರಲ್ಲಿ ಓದುವ ಆಸಕ್ತಿಯನ್ನು ಹೆಚ್ಚಿಸಿದೆ. ಒಂದೆಡೆ ಆ ತಿಂಗಳ ಸಾಹಿತಿಗಳ ಲಭ್ಯವಿರುವ ಎಲ್ಲಾ ಪುಸ್ತಕಗಳು ಸಿಗುವುದರಿಂದ ಓದುಗರಿಗೆ ಅನುಕೂಲವಾಗಿದೆ. ಕರ್ನಾಟಕದ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಮೊದಲ ಬಾರಿಗೆ ಈ ಯಶಸ್ವಿ ಕಾರ್ಯಕ್ರಮ ಮಾಡಿದ ಹೆಗ್ಗಳಿಕೆ ಉತ್ತರ ವಲಯಕ್ಕೆ ಸಲ್ಲುತ್ತದೆ. ಈ ವರೆಗೆ ಜ್ಞಾನಪೀಠ ಪುರಸ್ಕೃತರನ್ನು ಒಳಗೊಂಡಂತೆ ಬಹುತೇಕ ಖ್ಯಾತ ಸಾಹಿತಿಗಳ ಮಾಹಿತಿಯನ್ನು ಮಲ್ಲೇಶ್ವರಂ ಶಾಖೆಯಿಂದ ಈ ಕಾರ್ಯಕ್ರಮದ ಮೂಲಕ ಸಾರ್ವಜನಿಕ ಓದುಗರಿಗೆ ಒದಗಿಸುತ್ತಿದ್ದೇವೆ.