ನಿಯಮಗಳು

ಕೆಲಸದ ವೇಳೆ:

ರಾಜ್ಯ ಸರ್ಕಾರದಿಂದ ಸಾರ್ವಜನಿಕ ರಜೆ ಎಂದು ಘೋಷಿಸಲ್ಪಟ್ಟ ರಜಾ ದಿನಗಳು, ಎರಡನೇ ಮಂಗಳವಾರ, ನಾಲ್ಕನೇ ಶನಿವಾರ ಹಾಗೂ ವಾರದ ರಜೆ ಸೋಮವಾರ ಹೊರತುಪಡಿಸಿ ಶಾಖಾ ಗ್ರಂಥಾಲಯಗಳು (ಮುಖ್ಯ 4 ಶಾಖಾ ಗ್ರಂಥಾಲಯ) ಬೆಳಗ್ಗೆ 8.30 ರಿಂದ ರಾತ್ರಿ 8.00 ಗಂಟೆಯವರೆಗೆ, ಶಾಖಾ ಗ್ರಂಥಾಲಯಗಳು ಬೆಳಗ್ಗೆ 8.30 ರಿಂದ 11.30 ರವರೆಗೆ ಮತ್ತು ಸಂಜೆ 4.00 ರಿಂದ ರಾತ್ರಿ 8.00 ಗಂಟೆಯವರೆಗೆ ಸಾರ್ವಜನಿಕ ಸೇವೆಗಾಗಿ ತೆರೆದಿರುತ್ತವೆ.

ಗ್ರಂಥಾಲಯ್ಕಕೆ ಪ್ರವೇಶ:

  1. ಗ್ರಂಥಾಲಯಕ್ಕೆ ಪ್ರವೇಶಿಸುವ ಪೂರ್ವದಲ್ಲಿ ಪ್ರವೇಶ ದ್ವಾರದಲ್ಲಿ ಇಟ್ಟಿರುವ ಪುಸ್ತಕದಲ್ಲಿ ತಮ್ಮ ಹೆಸರು, ವಿಳಾಸ ಬರೆದು ಸಹಿ ಮಾಡಬೇಕು.
  2. ಓದುಗರು ತಮ್ಮ ವಸ್ತುಗಳಿಗೆ ತಾವೇ ಜವಾಬ್ದಾರರು. ಅಂತಹ ವಸ್ತುಗಳು ನಷ್ಟವಾದಲ್ಲಿ ಅಥವಾ ಅದಲು ಬದಲು ಆದಲ್ಲಿ ಉಂಟಾಗುವ ಹಾನಿಗೆ ಗ್ರಂಥಾಲಯ ಹೊಣೆಯಲ್ಲ.
  3. ಪ್ರತಿಯೊಬ್ಬರು ಗ್ರಂಥಾಲಯದಲ್ಲಿ ಶಾಂತತೆ ಕಾಪಾಡಲು ಸಹಕರಿಸಬೇಕು. ಗ್ರಂಥಾಲಯವನ್ನು ಉಪಯೋಗಿಸುವ ಇತರೇ ವ್ಯಕ್ತಿಗಳಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು.
  4. ಗ್ರಂಥಾಲಯದ ಸ್ವಚ್ಛತೆಯನ್ನು ಕಾಪಾಡುವುದು. ಧೂಮಪಾನ ಮಾಡುವುದು, ಅಸಭ್ಯತನದಿಂದ ವರ್ತಿಸುವುದು ಹಾಗೂ ಗ್ರಂಥಾಲಯದಲ್ಲಿ ನಿದ್ರಿಸುವುದನ್ನು ನಿಷೇದಿಸಲಾಗಿದೆ.
  5. ಗ್ರಂಥಾಲಯಕ್ಕೆ ಭೇಟಿ ನೀಡುವ ಸದಸ್ಯರು ಮತ್ತು ಎರವಲುದಾರರು ಕಾಲಕಾಲಕ್ಕೆ ಜಾರಿಯಲ್ಲಿರುವ ಗ್ರಂಥಾಲಯದ ನಿಯಮಗಳು ಮತ್ತು ಕ್ರಮಗಳಿಗೆ ಬದ್ಧರಾಗಿರಬೇಕು.
  6. ಗ್ರಂಥಾಲಯದಲ್ಲಿನ ಪುಸ್ತಕಗಳ ಅಥವಾ ಇತರೆ ವಸ್ತುಗಳನ್ನು ಕಳುವು ಮಾಡಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.

ಎರವಲು ನೊಂದಣಿ:

  1. ಬೆಂಗಳೂರು ನಗರದಲ್ಲಿ ವಾಸಿಸುವ ಯಾವುದೇ ವ್ಯಕ್ತಿಯು ಗ್ರಂಥಾಲಯದಿಂದ ಪುಸ್ತಕಗಳನ್ನು ಎರವಲು ಪಡೆಯಲು ನೊಂದಣಿಯನ್ನು ಮಾಡಿಸಬಹುದಾಗಿದೆ.
  2. ನಿರ್ಧಿಷ್ಠ ಗ್ರಂಥಾಲಯದಲ್ಲಿ ಎರವಲುದಾರರಾಗಿ ನೊಂದಾಯಿಸಿದ ವ್ಯಕ್ತಿಯು ಅದೇ ಕಾರ್ಡಿನಿಂದ ಮತ್ತೊಂದು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಎರವಲು ಪಡೆಯಲು ಅರ್ಹರಲ್ಲ.
  3. ಯಾವ ವ್ಯಕ್ತಿಯೇ ಆಗಲಿ ಗ್ರಂಥಾಲಯದ ಎರವಲು ನೊಂದಣಿ ಹೊಂದಲು ಅನರ್ಹನೆಂದು ಕಂಡು ಬಂದಲ್ಲಿ ಅಂತಹವರ ಅರ್ಜಿಗಳನ್ನು ತಿರಸ್ಕರಿಸುವ ಅಧಿಕಾರ ಗ್ರಂಥಾಲಯಾಧಿಕಾರಿಗಳಿಗೆ ಇರುತ್ತದೆ.

ಎರವಲು ಚೀಟಿ:

  1. ಎರವಲು ಚೀಟಿಗಳನ್ನು ವರ್ಗಾಯಿಸತಕ್ಕದಲ್ಲ.
  2. ಎರವಲು ಅವಧಿ ಗರಿಷ್ಠ 15 ದಿನಗಳು ಮಾತ್ರ.
  3. ಗ್ರಂಥಗಳನ್ನು ನಿಗದಿತ ದಿನಾಂಕದ ಒಳಗಾಗಿ ಹಿಂದಿರುಗಿಸತಕ್ಕದು, ಇಲ್ಲವಾದಲ್ಲಿ ನಿಗದಿತ ದಂಡ ಪಾವತಿಸತಕ್ಕದ್ದು.
  4. ಎರವಲು ಪಡೆದ ಗ್ರಂಥಗಳನ್ನು ಯಥಾಸ್ಥಿತಿಯಲ್ಲಿಯೇ ಹಿಂದಿರುಗಿಸುವುದು.
  5. ಕಳೆದ/ಹಾಳಾದ/ಹರಿದ ಗ್ರಂಥದ ಎರಡರಷ್ಟು ಬೆಲೆಯನ್ನು ದಂಡ ಶುಲ್ಕದೊಂದಿಗೆ ಪಾವತಿಸತಕ್ಕದ್ದು.
  6. ಗ್ರಂಥಾಲದಿಂದ ಪುಸ್ತಕಗಳನ್ನು ಎರವಲು ಪಡೆದುಕೊಳ್ಳುವುದನ್ನು ನಿಲ್ಲಿಸಬಯಸುವವರು ತಮ್ಮ ಎಲ್ಲಾ ಕಾರ್ಡುಗಳನ್ನು ರದ್ದು ಪಡಿಸುವುದಕ್ಕಾಗಿ ಗ್ರಂಥಾಲಯಕ್ಕೆ ಒಪ್ಪಿಸಬೇಕು.
  7. ಕಾರ್ಡುಗಳನ್ನು ಹೊಂದಿದ ಎರವಲುದಾರರು ಗ್ರಂಥಾಲಯದ ದಾಖಲೆಗಳಲ್ಲಿ ತೋರಿಸಿದಂತೆ ಆ ಕಾರ್ಡುಗಳಿಗೆ ಪ್ರತಿಯಾಗಿ ಕೊಟ್ಟ ಪುಸ್ತಕಗಳಿಗೆ ಹೊಣೆಗಾರರು.
  8. ಎರವಲುದಾರ ಕಾರ್ಡುಗಳಿಗೆ ಪ್ರತಿಯಾಗಿ ಪಡೆದುಕೊಂಡ ಎಲ್ಲಾ ಪುಸ್ತಕಗಳನ್ನು ಹಿಂದಿರುಗಿಸದೇ ಹಾಗೂ ಯಾವುದೇ ಬಾಕಿಯನ್ನು ತೀರಿಸದೇ ಠೇವಣಿ ಹಣವನ್ನು ಹಿಂತಿರುಗಿ ಪಡೆಯಲು ಅರ್ಹನಲ್ಲ.

ಎರವಲು ನಿಯಮಗಳು :

  1. ಗ್ರಂಥಾಲಯದಿಂದ ಪುಸ್ತಕಗಳನ್ನು ಎರವಲು ಪಡೆಯುವ ಹಾಗೂ ಹಿಂತಿರುಗಿಸುವ ವ್ಯವಸ್ಥೆಯನ್ನು ಎರವಲುದಾರರೇ ಮಾಡಿಕೊಳ್ಳಬೇಕು.
  2. ಎರವಲು ಪಡೆದ ಪುಸ್ತಕಗಳನ್ನು 15 ದಿನ ಅಥವ ನಿರ್ಧಿಷ್ಟ ಪಡಿಸಿದ ದಿನಾಂಕದೊಳಗಾಗಿ ಹಿಂದಿರುಗಿಸತಕ್ಕದ್ದು.
  3. ಎರವಲು ಪಡೆದುಕೊಂಡ ಪುಸ್ತಕಗಳನ್ನು ಬೇರೆಯವರಿಗೆ ಮರು ಎರವಲು ನೀಡುವುದಾಗಲಿ ಅಥವಾ ತನಗೆ ನೀಡಲಾದ ಕಾರ್ಡುಗಳ ಸೌಲಭ್ಯವನ್ನು ಬೇರೆಯವರಿಗೆ ನೀಡುವುದಕ್ಕೆ ಅವಕಾಶವಿರುವುದಿಲ್ಲ.
  4. ಪುಸ್ತಕಗಳನ್ನು ಎರವಲುದಾರರು ಕಳೆದರೆ ಮೂಲಬೆಲೆಯ ಎರಡರಷ್ಟು ಹಣವನ್ನು ಗ್ರಂಥಾಲಯಕ್ಕೆ ಕಟ್ಟಬೇಕು.
  5. ಯಾವುದೇ ವ್ಯಕ್ತಿಯು ಗ್ರಂಥಾಲಯಕ್ಕೆ ಸಂಬಂಧಪಟ್ಟ ಪುಸ್ತಕ, ಹಸ್ತಪ್ರತಿ ಹಾಗೂ ನಕ್ಷೆಗಳ ಮೇಲೆ ಬರೆಯುವುದು ಗುರುತು ಹಾಕುವುದು ಹಾಗೂ ಹಾಳು ಮಾಡುವುದನ್ನು ಪ್ರತಿಬಂಧಿಸಲಾಗಿದೆ.
  6. ಗ್ರಂಥಾಲಯಕ್ಕೆ ಸಂಬಂಧಪಟ್ಟ ಯಾವುದೇ ಆಸ್ತಿಗೆ ಹಾನಿ ಮಾಡಿದವರು ಅಂತಹ ಹಾನಿಯ ಮೌಲ್ಯವನ್ನು ಭರಿಸಬೇಕಾಗುತ್ತದೆ.
  7. ಗ್ರಂಥಾಲಯದಿಂದ ಹೊರಬರುವ ಪೂರ್ವದಲ್ಲಿ ಪರಾಮರ್ಶನಾ ವಿಭಾಗದಿಂದ ಪಡೆದ ಗ್ರಂಥಗಳನ್ನು ಆ ವಿಭಾಗದಲ್ಲೇ ಹಿಂದಿರುಗಿಸಬೇಕು.
  8. “ಪರಾಮರ್ಶೆಗೆ ಮಾತ್ರ” ಎಂದು ಗುರುತು ಮಾಡಿದ ಪುಸ್ತಕಗಳನ್ನು ಎರವಲು ನೀಡಲಾಗುವುದಿಲ್ಲ.